My Favourite Poems – Ondu saNNa hakkige by Shri Kuvempu
Posted by Prashant - 14/09/11 at 03:09:54 amIn modern kannada literature if anyone wants to see the grandeur of nature in words then one need not look beyond works of Shri Kuvempu. It is not common that a generation is privileged to have had a contemporary poet like Kuvempu amidst them. Such was the calibre of Kuvempu that he can take both grandiosity and inclemency of nature and translate it into words of such polish that all the auditory senses of the listener turn visual. That’s why he is one of my favourite poet.
This series called “My Favourite Poems” is a trivial attempt by a nobody to salute and celebrate the genius of Kuvempu and people like him. Also these happen to be the poems I enjoyed the most reading.
Please note you will need Kannada Font to read the post below
ಒಂದು ಸಣ್ಣ ಹಕ್ಕಿಗೆ
ಕವನ ಸಂಕಲನ – ಪಕ್ಷಿಕಾಶಿ
ಕವಿ – ಶ್ರೀ ಕುವೆಂಪು
“ನಿನಗೆ ನಾನು, ನನಗೆ ನೀನು,
ಸಣ್ಣ ಹಕ್ಕಿಯೆ;
ಹಾಡು, ಕೇಳಿ ನಲಿವೆ ನಾನು,
ಬಣ್ಣ ಚುಕ್ಕಿಯೆ.
ಕೇಳ್ದರೇನು ಬಿಟ್ಟರೇನು
ಉಳಿದ ಲೋಕವು?
ಉಲಿಯೆ ನೀನು, ನಲಿಯೆ ನಾನು,
ನಮಗೆ ನಾಕವು!”
ಆಗ ತಾನೆ ಮೂಡುತಿತ್ತು
ಪುಷ್ಯ ದಿನಮಣಿ.
ಕಟ್ಟುತಿದ್ದ ಮನೆಯ ಬಳಿ
ನೆಟ್ಟ ಬಿದಿರ ನೆತ್ತಿಯಲಿ
ಪುಟ್ಟದೊಂದು ಚಿಟ್ಟಿಹಕ್ಕಿ
(ಬಾನಿಗೆದುರು ಕರಿಯ ಚುಕ್ಕಿ!)
ನಲುಮೆ ಚಿಲುಮೆಯುಕ್ಕಿಯುಕ್ಕಿ
ತನ್ನ ಸುಖಕೆ ತಾನೆ ಮಿಕ್ಕಿ
ತನಗೆ ತಾನೆ ಹಾಡುತ್ತಿತ್ತು
ತನ್ನ ಮನದಣಿ!
ರಸ್ತೆಯಲ್ಲಿ ನಡೆವ ಮಂದಿ
(ಮುತ್ತಿನೆದುರು ಮುಂದೆ ಹಂದಿ!)
ಹಾಳು ಹರಟೆಹೊರೆಯ ಹೊತ್ತು
ಕೇಳದದನು ಸಾಗುತಿತ್ತು.
ಜನರು ಕೇಳಲಿಲ್ಲವಂದು
ನಾಣ್ಚಲಿಲ್ಲ, ಮುಳಿಯಲಿಲ್ಲ,
ನಿಲಿಸಲಿಲ್ಲ ತನ್ನ ಸೊಲ್ಲ;
ರವಿಗೆ ಗಾನದರ್ಘ್ಯವಿತ್ತು
ಕವಿಗೆ ರಸದ ತೀರ್ಥವಿತ್ತು,
ತನಗೆ ತಾನೆ ಹಾಡುತಿತ್ತು
ಹಕ್ಕಿ ಮನದಣಿ!
“ನಿನಗೆ ನಾನು, ನನಗೆ ನೀನು….”
ಎಂದು ಹಾಡುತಿರಲು ನಾನು,
ಕೆಂಕಮಾಗಿ ಮೂಡು ಬಾನು
ಆಗತಾನೆ ಮೂಡುತಿತ್ತು
ಪುಷ್ಯ ದಿನಮಣಿ!
ನಲಿ = To be happy
ಉಲಿ = To make sound, shout
ನಾಕ = Heaven
ಪುಷ್ಯ = One of the navaratnas. It can also mean tender. Also means a star.
ದಿನ+ಮಣಿ = Day+jewel. It mean something that is a jewel of the day or Sun.
ಚಿಟ್ಟಿ = Small
ಚಿಲುಮೆ = To bubble up like water at the source.
ಮನದಣಿ = ಮನ+ದಣಿ = ಮನ means mind and ದಣಿ means doing something until completely satisfied.
ನಾಣ್ಚ = Hesitation, shy
ಮುಳಿ = To be angry
ಸೊಲ್ಲ = Babble or talk
ಗಾನದರ್ಘ್ಯ = ಗಾನದ+ಅರ್ಘ್ಯ = song+offering
ಕೆಂಕ = Crimson red color
ಮಾಗಿ = To ripen
ಮೂಡು = Just born
This poem is from the collection called “Pakshikashi” by Kuvempu. It is about the connection he makes with two three elements in nature, the tiny black bird, sun and the crimson red sky at the time of beautiful dawn and how that connection elates the author.
“ನಿನಗೆ ನಾನು, ನನಗೆ ನೀನು,ಸಣ್ಣ ಹಕ್ಕಿಯೆ ”
Here Poet draws a boundary for the reader to work and within this it is just the poet and the little bird.
“ಕೇಳ್ದರೇನು ಬಿಟ್ಟರೇನು ಉಳಿದ ಲೋಕವು? ಉಲಿಯೆ ನೀನು, ನಲಿಯೆ ನಾನು,ನಮಗೆ ನಾಕವು!”
Look at the way the poet provides strength to the connections that he makes with elements within the boundary. He says what if rest of the world does not care, as long as you(bird) sing and I enjoy it, it is heaven.
“ಆಗ ತಾನೆ ಮೂಡುತಿತ್ತು ಪುಷ್ಯ ದಿನಮಣಿ.”
Then poet introduces a new element and hence he needs to draw new connection between elements and he does so when he says “ಬಾನಿಗೆದುರು ಕರಿಯ ಚುಕ್ಕಿ”
Based on the title, the main character is the small bird and look at the way he provides that extra oomph to its character
“ತನ್ನ ಸುಖಕೆ ತಾನೆ ಮಿಕ್ಕಿ, ತನಗೆ ತಾನೆ ಹಾಡುತ್ತಿತ್ತು, ತನ್ನ ಮನದಣಿ!”
The little bird sings not for others but for its own self and it sings until its hearts content. Poet reinforces this point once again when he says;
“ಜನರು ಕೇಳಲಿಲ್ಲವಂದು ನಾಣ್ಚಲಿಲ್ಲ, ಮುಳಿಯಲಿಲ್ಲ, ನಿಲಿಸಲಿಲ್ಲ ತನ್ನ ಸೊಲ್ಲ;”
The strength of emotion that the poet develops through that connection with the little bird is made clear when he talks about people who are unable to make that connection, he calls them;
“ಮುತ್ತಿನೆದುರು ಮುಂದೆ ಹಂದಿ”
And the beautiful conclusion to that high of emotional connect;
“ರವಿಗೆ ಗಾನದರ್ಘ್ಯವಿತ್ತು, ಕವಿಗೆ ರಸದ ತೀರ್ಥವಿತ್ತು”
All this drama in the backdrop of crimson red sky dotted by an adolescent sun
“ಕೆಂಕಮಾಗಿ ಮೂಡು ಬಾನು, ಆಗತಾನೆ ಮೂಡುತಿತ್ತು ಪುಷ್ಯ ದಿನಮಣಿ!”
September 14, 2011 | In My Favourite Poems | No Comments
ಕುಮಾರವ್ಯಸ – ಕರ್ಣಾಟ ಭಾರತ ಕಥಾಮಂಜರಿ (ಆದಿಪರ್ವ, ನಾಲ್ಕನೆಯ ಸಂಧಿ)
Posted by Prashant - 12/09/11 at 07:09:29 pmPlease note you will need Kannada Font to read the post below
ಕೇಳಿದಳು ಗಾಂಧಾರಿ ಕುಂತಿಗೆ
ಬಾಲ ಕೇಳಿ ವಿನೋದವೇ ಕೈ
ಮೇಳವಿಸಿತೇ ಮುನ್ನ ಹಾ ತಪ್ಪೇನು ತಪ್ಪೇನು
ಕಾಳು ಮಾಡಿದನೆನಗೆ ಮುನಿಪತಿ
ಠೌಳಿಕಾರನಲಾ ಸುಡೀ ಗ
ರ್ಭಾಳಿಗಳನೆಂದಬಲೆ ಹೊಸೆದಳು ಬಸುರನೊಡೆಮುರಿದು…………………………………೪೧
ಕೇಳಿದಳು ಗಾಂಧಾರಿ, ಕುಂತಿಗೆ ಬಾಲಕೇಳಿ ವಿನೋದವೇ? ಕೈ ಮೇಳವಿಸಿತೇ ಮುನ್ನ? ಹಾ ತಪ್ಪೇನು ತಪ್ಪೇನು ಕಾಳು ಮಾಡಿದನು ಎನಗೆ ಮುನಿ ಪತಿ ಠೌಳಿಕಾರನಲಾ. ಸುಡು ಈ ಗರ್ಭಾಳಿಗಳು ಎಂದ ಅಬಲೆ ಹೊಸೆದಳು ಬಸುರನು ಒಡೆಮುರಿದು
ಬಾಲಕೇಳಿ = Baby Pranks
ವಿನೋದ = Enjoy, happiness
ಕೈ ಮೇಳವಿಸು = ಕೈ+ಮೇಳವಿಸು = Hand + To come together, join. Here it mean that all events came together to achieve the required purpose.
ಕಾಳು = Do something wrong or bad
ಠೌಳಿ = Fraud, One who cheats
ಅಬಲೆ = One who does not have any strength, General word for Women.
ಹೊಸೆ = It means to rub something (against the ground) with either hand or leg
ಬಸುರನು = Foetus, Womb
ಒಡೆಮುರಿದು = To Twist something until it breaks.
The news trickled down to Gandhari. She was furious. “Is Kunti to revel in baby’s pranks in advance of me?” she stormed. “Alas! that false muni, he led me astray. Away with this thing burdening my womb”. thus fuming, she kneaded hard. Here protruding belly with unfeeling hands.
What gory details in so few words. That is Kumaravyasa for you. Look at the level of feeling of hatred that Gandhari shows, the sense of loss of kingship for her children has blinded her so much she twists her own womb without thinking about consequences. Look at the intensity that Kumaravyasa brings when he says ಅಬಲೆ ಹೊಸೆದಳು ಬಸುರನು ಒಡೆಮುರಿದು
ಉದುರಿದವು ಧರಣಿಯಲಿ ಬಲು ಮಾಂ
ಸದ ಸುರಕ್ತದ ಘಟ್ಟಿಗಳು ಖಂ
ಡದ ಸುಢಾಳದ ಜಿಗಿಯ ಪೇಸಿಕೆ ನಿಕರ ನೂರೊಂದು
ಕೆದರಿದಳು ವಾಮಾಂಫ಼್ರಿಯಲಿ ನೂ
ಕಿದಳು ಹಾಯ್ಕಿವ ಹೊರಗೆನುತ ನೋ
ಡಿದಳು ಕರೆ ಕೈನೆಯರನೆನುತ ಕಠೋರ ಕೋಪದಲಿ…………………………………೪೨
ಉದುರಿದವು ಧರಣಿಯಲಿ ಬಲು ಮಾಂಸದ ಅಸು, ರಕ್ತದ ಘಟ್ಟಿಗಳು, ಖಂಡದ ಸುಢಾಳದ ಜಿಗಿಯ ಪೇಸಿಕೆ ನಿಕರ ನೂರೊಂದು ಕೆದರಿದಳು ವಾಮಾಂಫ಼್ರಿಯಲಿ ನೂಕಿದಳು, ಹಾಯ್ಕಿವ ಹೊರಗೆನುತ ನೋಡಿದಳು ಕರೆ ಕೈನೆಯರನು ಎನುತ ಕಠೋರ ಕೋಪದಲಿ
ಸುರಕ್ತದ = I guess this has to be split as ಅಸು+ರಕ್ತದ where ಅಸು mean some thing that is forcibly done. I am not very sure though
ಸುಢಾಳ = Shining, glaring
ಪೇಸಿಕೆ = Nasty
ನಿಕರ = Group
ವಾಮಾಂಫ಼್ರಿ = Left leg
ಕೈನೆ = Maid
Fragments of blood smeared flesh, lumps of slithering nastiness, a hundred and one in number dropped to the ground. Kicking these indecent and offensive bits disdainfully with her left foot, she shouted for her maids and ordered them to throw those nauseating and unsightly pieces of flesh and blood away
Gory details continue. She twists her womb and 101 flesh lumps fall off it and then she kicks them asking the maids to dispose them off. Note that poet says there were 101 lumps, but there are stories where it is reported that there was only one lump of flesh which was divided into 101 by Vyasa. Not sure what is the story in original Mahabharata. Also Gandhari had 101 kids out of which 100 were sons who were the Kauravas and one daughter Dhusala. Also Dhirtarashra had one more kid from a Vasya called Yuyutsu. He is not counted under Kauravas as he joined Pandavas.
ತನ ತನಗೆ ನಡು ನಡಗಿ ಕಾಂತಾ
ಜನವು ಬಂದುದು ತಾಯೆ ಬೆಸನೇ
ನೆನಲು ಬಿಸುಡಿವನೂರ ಹೊರಗೆಂಬಾ ಮುಹೂರ್ತದಲಿ
ಮುನಿಪ ವೇದವ್ಯಾಸನಾಕೆಯ
ಮನೆಗೆ ಬಂದನು ಕಂಡನೀ ಕಾ
ಮುನಿಯ ಕೋಲಾಹಲವಿದೇನೇನೆಂದು ಬೆಸಗೊಂಡ…………………………………೪೩
ತನ ತನಗೆ ನಡು ನಡಗಿ ಕಾಂತಾ ಜನವು ಬಂದುದು ತಾಯೆ ಬೆಸನ ಏನು ಎನಲು, ಬಿಸುಡು ಇವ ನೂರ ಹೊರಗೆಂಬ ಆ ಮುಹೂರ್ತದಲಿ ಮುನಿಪ ವೇದವ್ಯಾಸನು ಆಕೆಯ ಮನೆಗೆ ಬಂದನು ಕಂಡನು ಈ ಕಾಮುನಿಯ ಕೋಲಾಹಲ ವಿದು ಏನು ಎಂದು ಬೆಸಗೊಂಡ
ಬೆಸನ = Task
ಬೆಸಗೊಳ್ = To ask
Trembling the serving maids tiptoes into her august presence and inquired what was her ladyship’s pleasure and even as she was imperiously instructing them to get rid of those eyesores, sage Vedavyasa providentially walked in and seeing all the commotion enquired what it was all about.
ಭರರ ಸಂತಾನಕೆ ಕುಮಾರರ
ಹೆರುವೆ ನಾ ಮುನ್ನೆಂದು ಗರ್ಭವ
ಧರಸಿದೆನು ನಿಮ್ಮಡಿಯ ಕೄಪೆಯಲಿ ಮಂತ್ರ ಭಾವಿತವ
ವರುಷವೆರಡಾಯ್ತಿದರ ಭಾರವ
ಧರಿಸಿದೆನು ದಾಯಾದ್ಯರೊಳಗವ
ತರಿಸಿದನು ಮಗನೆನುತ ಮುಖದಿರುಹಿದಳು ಗಾಂಧಾರಿ…………………………………೪೪
ಭರತ ಸಂತಾನಕೆ ಕುಮಾರರ ಹೆರುವೆ ನಾ ಮುನ್ನೆಂದು ಗರ್ಭವ ಧರಸಿದೆನು ನಿಮ್ಮಡಿಯ ಕೄಪೆಯಲಿ ಮಂತ್ರ ಭಾವಿತವ ವರುಷವು ಎರಡಾಯ್ತ ಇದರ ಭಾರವ ಧರಿಸಿದೆನು ದಾಯಾದ್ಯರ ಒಳಗ ಅವತರಿಸಿದನು ಮಗನ ಎನುತ ಮುಖ ತಿರುಹಿದಳು ಗಾಂಧಾರಿ
ದಾಯಾದ್ಯ = Siblings
“In the hope of being the first to give children to the Bharatha stock, I wen through this arduous pregnancy. By the grace of the charm vouchsafed by your holiness. Two years are gone I’m still heavy with this unseemly burden. Meanwhile a son is already born to the other side” moaning thus, Gandhari averted her face.
ಮರುಳ ಹೆಂಗುಸಲಾ ಮಹಾತ್ಮರ
ಪರಿಯ ನೀನೆಂತರಿವೆ ಗರ್ಭೋ
ತ್ಕರವ ಕೆಡಿಸಿದೆ ಪಾಪಿ ನೀ ಸಾರೆನುತ ಮುನಿ ಮುಳಿದು
ತರಿಸಿದನು ಘೄತಪೂರಿತದ ಕೊ
ಪ್ಪರಿಗೆಗಳನೊಂದೊಂದರೊಂದರೊ
ಳಿರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ…………………………………೪೫
ಮರುಳ ಹೆಂಗುಸಲಾ ಮಹಾತ್ಮರ ಪರಿಯ ನೀನೆಂತರಿವೆ ಗರ್ಭೋತ್ಕರವ ಕೆಡಿಸಿದೆ ಪಾಪಿ ನೀ ಸಾರೆನುತ, ಮುನಿ ಮುಳಿದು. ತರಿಸಿದನು ಘೄತ ಪೂರಿತದ ಕೊಪ್ಪರಿಗೆಗಳನು ಒಂದೊಂದರ ಒಂದರೊಳು ಇರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ
ಮುಳಿ = To become angry
ಘೄತ = Ghee
ಕೊಪ್ಪರಿಗೆ = Container
ತಳಿ = To spray
“Foolish women! what do you know of the ways of the sublime? In petulant anger you’ve ruined your own brood, women! Sinful one, out of my sight.” Thus rebuking her Veda Vyasa procured a battery of ghee-filled cauldrons, in each of which he carefully deposited a single foetus and sprinkling consecrated water, created a safe refuge for them to grow in.
September 12, 2011 | In Kumaravyasa - Karnata Bharatha Kathamanjari | No Comments
ಕುಮಾರವ್ಯಸ – ಕರ್ಣಾಟ ಭಾರತ ಕಥಾಮಂಜರಿ (ಆದಿಪರ್ವ, ನಾಲ್ಕನೆಯ ಸಂಧಿ)
Posted by Prashant - 03/08/11 at 03:08:44 amPlease note you will need Kannada Font to read the post below
ತರುಣಿ ಪಾಂಡುವಿನಾಙ್ಞೆಯನು ನಿಜ
ಶಿರದೊಳಾಂತು ಸಮಸ್ತ ಮುನಿ ಮು
ಖ್ಯರಿಗೆ ವಂದಿಸಿ ಹರಿ ಹರ ಬ್ರಹ್ಮಾದಿಗಳಿಗೆರಗಿ
ಸರಸಿಯಲಿ ಮಿಂದಳು ಮುನೀಂದ್ರನ
ಪರಮ ಮಂತ್ರಾಕ್ಷರವ ತಾನು
ಚ್ಚರಿಸಿ ನೆನೆದಳು ಯಮನನಾಕ್ಷಣವಾತನೈತಂದ…………………………………೩೬
ತರುಣಿ ಪಾಂಡುವಿನ ಆಙ್ಞೆಯನು ನಿಜ ಶಿರದೊಳು ಆಂತು ಸಮಸ್ತ ಮುನಿ ಮುಖ್ಯರಿಗೆ ವಂದಿಸಿ ಹರಿ ಹರ ಬ್ರಹ್ಮಾದಿಗಳಿಗೆ ಎರಗಿ ಸರಸಿಯಲಿ ಮಿಂದಳು ಮುನೀಂದ್ರನ ಪರಮ ಮಂತ್ರಾಕ್ಷರವ ತಾನು ಉಚ್ಚರಿಸಿ ನೆನೆದಳು ಯಮನನು ಆಕ್ಷಣವ ಆತನೈತಂದ
ಸರಸಿ = River
ಮಿಂದಳು = To take a dip
Considering Pandu’s advice as a command Kunti bowed low in reverence to the group of sages and with a prayer to the supreme trinity, took a holy dip in the river. then prayerfully breathing the secret formula taught by the great muni, she invoked Yama, god of death
ಸತಿಯ ಸಮ್ಮುಖನಾಗಿ ವೈವ
ಸ್ವತನು ನುಡಿದನಿದೇಕೆ ನಮ್ಮ
ಕ್ಷಿತಿಗೆ ಬರಿಸಿದೆಯೆನಲು ಲಜ್ಜಾವನತಮುಖಿಯಾಗಿ
ಸುತನ ಕರುಣಿಪುದೆನಲು ಭಯ ಪರಿ
ವಿತತ ವಿಮಲ ಸ್ವೇದಜಲ ಕಂ
ಪಿತೆಯ ಮುಟ್ಟಿ ತಥಾಸ್ತುವೆನುತ ಕೄತಾಂತ ಬೀಳ್ಲೊಂಡ…………………………………೩೭
ಸತಿಯ ಸಮ್ಮುಖನಾಗಿ ವೈವಸ್ವತನು ನುಡಿದನು ಇದೇಕೆ ನಮ್ಮ ಕ್ಷಿತಿಗೆ ಬರಿಸಿದೆ ಯೆನಲು ಲಜ್ಜಾವನತ ಮುಖಿಯಾಗಿ ಸುತನ ಕರುಣಿಪುದು ಎನಲು ಭಯ ಪರಿವಿತತ ವಿಮಲ ಸ್ವೇದ ಜಲ ಕಂಪಿತೆಯ ಮುಟ್ಟಿ ತಥಾಸ್ತುವೆನುತ ಕೄತಾಂತ ಬೀಳ್ಲೊಂಡ
ವೈವಸ್ವತ = Yama. In Sanskrit Vivaswat mean bird of fire, it is a root word for Vaivaswan, which refers to “Sun”. So Vivaswata is son of Vaivaswan i.e. Yama is son of Surya or Sun.
ಕ್ಷಿತಿ = Earth
ಪರಿವಿತ = To come swiftly
ವಿಮಲ = Pure
ಸ್ವೇದ = Sweat
ಕೄತಾಂತ = Name for Lord Yama
Instantly Vyvaswatha appeared before her and demanded to know why he was called to appear on earth. Blushing the embarrassment, she replied that it was to seek a son through him, Even as she confessed it, her whole body shook in trepidation and was bathed in perspiration. Softly caressing her trembling body and promising “It shall be so” the god of death departed.
ಧಾರುಣೀಪತಿ ಕೇಳು ಕುಂತೀ
ನಾರಿಗಾದುದು ಗರ್ಭ ಹರುಷದ
ಭಾರದಲಿ ಸತಿ ತಗ್ಗಿದಳು ನವ ಪುರ್ಣಮಾಸದಲಿ
ಚಾರುತರ ನಕ್ಷತ್ರ ಶುಭದಿನ
ವಾರ ಲಗ್ನದೊಳಿಂದುಕುಲ ವಿ
ಸ್ತಾರಕನು ಸುಕುಮಾರವತರಿಸಿದನು ಧರಣಿಯಲಿ…………………………………೩೮
ಧಾರುಣೀಪತಿ ಕೇಳು ಕುಂತೀ ನಾರಿಗೆ ಆದುದು ಗರ್ಭ ಹರುಷದ ಭಾರದಲಿ ಸತಿ ತಗ್ಗಿದಳು ನವ ಪುರ್ಣಮಾಸದಲಿ. ಚಾರುತರ ನಕ್ಷತ್ರ ಶುಭದಿನ ವಾರ ಲಗ್ನದೊಳು ಇಂದುಕುಲ ವಿಸ್ತಾರಕನು, ಸುಕುಮಾರ ಅವತರಿಸಿದನು ಧರಣಿಯಲಿ
ಚಾರು = Favorable, suitable
Give ear to my tale, oh protector of the earth; Kunti conceived and in the joy of anticipation became humble. Nine months rolled by and on an auspicious day with a favorable conjunction of stars and planets was born a son destined to bring glory to the moon dynasty.
ನಿರ್ಮಲಿನವಾಯ್ತಖಿಲ ದೆಸೆ ದು
ಷ್ಕರ್ಮತತಿ ಬೆಚ್ಚಿದುದು ಸಾಕ್ಷಾತ್
ಧರ್ಮವೇ ಧರಣಿಯಲಿ ನೄಪ ರೊಪಾಗಿ ಜನಿಸಿತಲ
ಬುರ್ಮಹೀಶರ ಹೊತ್ತ ಭಾರದ
ಕರ್ಮ ವೇದನೆ ಧಾತ್ರಿಗಿಳಿದುದು
ಧರ್ಮವಿನ್ನೆಮಗಹುದೆನುತ ಹೆಚ್ಚಿದುದು ಮುನಿನ್ನಿಕರ…………………………………೩೯
ನಿರ್ಮಲಿನ ವಾಯ್ತ ಅಖಿಲ. ದೆಸೆ ದುಷ್ಕರ್ಮತತಿ ಬೆಚ್ಚಿದುದು ಸಾಕ್ಷಾತ್ ಧರ್ಮವೇ ಧರಣಿಯಲಿ ನೄಪ ರೊಪಾಗಿ ಜನಿಸಿತಲ ಬುರ್ಮಹೀಶರ ಹೊತ್ತ ಭಾರದ ಕರ್ಮ ವೇದನೆ ಧಾತ್ರಿಗಿಳಿದುದು ಧರ್ಮವು ಇನ್ನ ಎಮಗ ಅಹುದು ಎನುತ ಹೆಚ್ಚಿದುದು ಮುನಿನ್ನಿಕರ
ಧಾತ್ರಿ = Earth
At that instant there came about wholesomeness in all directions; Propensity for evil-doing beat a hasty retreat. Was it not Dharma that took birth on earth in princely guise? “Now the earth is rid of the baneful burden of bad kings. Hereafter we may head the path of rectitude, untrammeled” Chrous’d the saintly order in joy.
ಧರಣಿಪತಿ ಧರ್ಮಜನ ಮುಖ ಸಂ
ದರುಶನವ ಮಾಡಿದನು ಹೆಚ್ಚಿದ
ಹರುಷ ಭಾರಕೆ ಚಿತ್ತ ತಗ್ಗಿತು ಮುಗ್ಗಿತಡಿಗಡಿಗೆ
ಹರಿದು ಪುತ್ರೋತ್ಸವದ ನುಡಿ ಗಜ
ಪುರದೊಳಬ್ಬರವಾಯ್ತು ಪಾಂಡುವಿ
ನರಸಿಯಲಿ ಸಂತಾನ ಜನಿಸಿದುದೆಂದು ಜನಜನಿತ…………………………………೪೦
ಧರಣಿಪತಿ ಧರ್ಮಜನ ಮುಖ ಸಂದರುಶನವ ಮಾಡಿದನು. ಹೆಚ್ಚಿದ ಹರುಷ ಭಾರಕೆ ಚಿತ್ತ ತಗ್ಗಿತು, ಮುಗ್ಗಿತು ಅಡಿಗಡಿಗೆ. ಹರಿದು ಪುತ್ರೋತ್ಸವದ ನುಡಿ ಗಜ ಪುರದೊಳು ಅಬ್ಬರವಾಯ್ತು ಪಾಂಡುವಿನ ಅರಸಿಯಲಿ ಸಂತಾನ ಜನಿಸಿದುದೆಂದು ಜನಜನಿತ
ಮುಗ್ಗು = It means to fall flat on face, but here it means to bend forwards or to lower(in humility)
ಅಡಿಗಡಿಗೆ = Doing some thing again and again. Repeatedly.
ಗಜ = Elephant. Gajapura is Hastinapura
ಅಬ್ಬರ = Become a sensation
King Pandu beheld the baby Dharmaja’s face. Profound joy filled his heart with humility. News of his birth if the prince spreading from place to place, reached Elephant city in due course. to cause a sensation asn was the main topic of conversation. In fact it became the talk of the town.
August 3, 2011 | In Kumaravyasa - Karnata Bharatha Kathamanjari | No Comments
ಕುಮಾರವ್ಯಸ – ಕರ್ಣಾಟ ಭಾರತ ಕಥಾಮಂಜರಿ (ಆದಿಪರ್ವ, ನಾಲ್ಕನೆಯ ಸಂಧಿ)
Posted by Prashant - 21/07/11 at 03:07:24 amPlease note you will need Kannada Font to read the post below
ಲೋಲಲೋಚನೆ ದೄಢ ಪತಿವ್ರತೆ
ಯೇಳು ದು:ಖಿಸಬೇಡ ಭೄಗು ಜಾ
ಬಾಲಿ ಜಮದಗ್ನ್ಯಾದಿ ದಿವ್ಯ ಮುನೀಂದ್ರ ಗಣವಿದೆಲ
ಓಲಗಿಸುವುದು ದುಷ್ಕ್ರತಿಗೆ ನಿ
ಷ್ಪಾಳೆಯವು ಬಳಿಕಹುದು ಮಂತ್ರ ವಿ
ಶಾಲ ಬೀಜದಿಯಹುದು ಸಂತತಿ ಕಾಂತೆ ಕೇಳೆಂದ…………………………………೩೧
ಲೋಲ ಲೋಚನೆ, ದೄಢ ಪತಿವ್ರತೆ, ಯೇಳು, ದು:ಖಿಸಬೇಡ, ಭೄಗು ಜಾಬಾಲಿ ಜಮದಗ್ನ್ಯಾದಿ ದಿವ್ಯ ಮುನೀಂದ್ರ ಗಣವಿದೆ. ಓಲಗಿಸುವುದು ದುಷ್ಕ್ರತಿಗೆ ನಿಷ್ಪಾಳೆಯವು ಬಳಿಕ ಅಹುದು ಮಂತ್ರ ವಿಶಾಲ ಬೀಜದಿಯಹುದು ಸಂತತಿ ಕಾಂತೆ ಕೇಳೆಂದ
ಲೋಲ = Fickle
ಲೋಚನೆ = Eyes
ದೄಢ = Firm
ಪತಿವ್ರತೆ = Women who is very faithful to her husband
ಗಣ = Galaxy
ದುಷ್ಕ್ರತಿ = ದುಷ+ಕೄತಿ = Bad+Task = Sin
ನಿಷ್ಪಾಳೆ = Not sure what this word means
“One-with-rolling-eyes, ever faithful to marriage vows, arise; Do not despair. We’ve here a galaxy of rishis, among them Bhrugu, Jabali and Jamadagni. If you serve anyone of them our misfortune will come to an end. Out of th magic seed of their favour will emerge our offspring” Thus he sought to console her
ಭವದನುಗ್ರಹದಿಂದ ಸುತರು
ದ್ಭವಿಸಿದರೆ ಲೇಸನ್ಯಥಾ ಸಂ
ಭಬಿಸಿದರೆ ದಷ್ಕೀರ್ತಿವಧುವೆಂಜಲಿಸಳೇ ಕುಲವ
ಅವನಿಪತಿ ಕೇಳ್ ನಹುಷ ನಳ ಪೌ
ರವ ಸುಹೋತ್ರಾದ್ಯರ ನಿಜಾತ್ಮೋ
ದ್ಭವರ ಪಾರಂಪರೆಗೆ ಗತಿಯೇನೆಂದಳಾ ಕುಂತಿ…………………………………೩೨
ಭವದ ಅನುಗ್ರಹದಿಂದ ಸುತರು ಉದ್ಭವಿಸಿದರೆ ಲೇಸ ಅನ್ಯಥಾ ಸಂಭಬಿಸಿದರೆ ದುಷ್ಕೀರ್ತಿ. ವಧು ಆಂಜಲಿಸಳೇ. ಕುಲವ, ಅವನಿಪತಿ ಕೇಳ್, ನಹುಷ ನಳ ಪೌರವ ಸುಹೋತ್ರ ಆದ್ಯರ ನಿಜ ಆತ್ಮೋದ್ಭವರ ಪಾರಂಪರೆಗೆ ಗತಿ ಯೇನು ಎಂದಳಾ ಕುಂತಿ
ವಧು = this is a generic term used to refer to women who getting married or wife, daughter-in-law etc.
ಆಂಜಲಿಸು = something that will break when touched
“It would be felicitous if sons are born through your favour. Wouldn’t it be a blot on the fair name of out family if they are born otherwise? Maharaja. what about the future of the scintillating line established by Nahusha Nala Pourava Suhotra and others, a hitherto unbroken line?” questioned Kunti
ಅರಸಿ ಕೇಳ್ ತದ್ಬೀಜ ಪಾರಂ
ಪರೆ ಮುರಿಯೆ ತತ್ ಕ್ಷೇತ್ರದಲಿ ಮುನಿ
ವರರ ಕಾರುಣ್ಯದಲಿ ಪುತ್ರೋದ್ಭವವದೇ ವಿಹಿತ
ಪರಮ ವೈದಿಕ ಸಿದ್ಧವಿದು ಸರ
ಸಿರುಹಮುಖಿ ನಿಶ್ಯಂಕೆಯಲಿ ನೀ
ಧರಿಸು ಮುನಿ ಮಂತ್ರೋಪದೇಶವನಿದುವೆ ನಿರ್ದೋಷ…………………………………೩೩
ಅರಸಿ ಕೇಳ್ ತತ್ ಬೀಜ ಪಾರಂಪರೆ ಮುರಿಯೆ ತತ್ ಕ್ಷೇತ್ರದಲಿ ಮುನಿವರರ ಕಾರುಣ್ಯದಲಿ ಪುತ್ರ ಉದ್ಭವು ಅದೇ ವಿಹಿತ ಪರಮ ವೈದಿಕ ಸಿದ್ಧವಿದು. ಸರಸಿರುಹ ಮುಖಿ, ನಿಶ್ಯಂಕೆಯಲಿ ನೀ ಧರಿಸು ಮುನಿ ಮಂತ್ರೋಪದೇಶವನು ಎದುವೆ ನಿರ್ದೋಷ
ತತ್ ಕ್ಷೇತ್ರದಲಿ = In this situation
ವಿಹಿತ = Right way, correct way
ಸರಸಿರುಹ = lotus
“Here me, my queen. Should the legitimate continuity of succession snap, it would be but right and proper that a son be born through the benevolent co-operation of a renowned saint. This is the dictum of the highest scriptural authority. Without hesitation you would do well to receive the favor of a muni. It would be without a blemish”.
ಆದಡವನಿಪ ಬಿನ್ನಹವು ತನ
ಗಾದಿಯಲಿ ದೊರ್ವಾಸಮುನಿ ಕರು
ಣೋದಯದಿತ್ತೈದು ಮಂತ್ರಾಕ್ಷರದ ವರವುಂಟು
ನೀ ದಯಾಂಬುಧಿ ನಿನ್ನನುಗ್ರಹ
ವಾದುದಾದರೆ ತದ್ವಿಧಾನದ
ಲಾದರಿಸುವೆನು ಪುತ್ರ ಕಾಮ್ಯವನೆಂದಳಾ ಕುಂತಿ…………………………………೩೪
ಆದಡ, ಅವನಿಪ ಬಿನ್ನಹವು, ತನಗೆ ಆದಿಯಲಿ ದೊರ್ವಾಸ ಮುನಿ ಕರುಣ ಉದಯದಲಿ ಇತ್ತ ಐದು ಮಂತ್ರಾಕ್ಷರದ ವರವುಂಟು. ನೀ ದಯ ಆಂಬುಧಿ ನಿನ್ನ ಅನುಗ್ರಹ ವಾದುದಾದರೆ ತತ್ ವಿಧಾನದಲಿ ಆದರಿಸುವೆನು ಪುತ್ರ ಕಾಮ್ಯವನು ಎಂದಳಾ ಕುಂತಿ
ಆದಡ = Not sure how to split this word not its meaning.
“In that case, my king, I’ve representation to make. In my girlhood days Sage Durvasa had conferred a boon on me with five components in it. Boundless ocean of compassion, if you’ll bless me, I shall bring forth sons with the help of those incantations five” Pleaded Kunti.
ಲೇಸನಾಡಿದೆ ಕುಂತಿ ಮುನಿಯುಪ
ದೇಶಿಸಿದನೇ ನಮ್ಮ ಭಾಗ್ಯವಿ
ದೈಸಲೇ ನೀ ದೄಢಪತಿವ್ರತೆಯೆನ್ನನುಜ್ಞೆಯಲಿ
ಭಾಸುರರ ನೀ ಭರತವಂಶ ವಿ
ಲಾಸರನು ಕೄತ ಶತ್ರು ಪಕ್ಷ ವಿ
ನಾಶರನು ಬೆಸಲಾಗು ಹೋಗೆನ್ನಾಣೆ ಹೋಗೆಂದ…………………………………೩೫
ಲೇಸ ಆಡಿದೆ ಕುಂತಿ. ಮುನಿಯು ಉಪದೇಶಿಸಿದನೇ. ನಮ್ಮ ಭಾಗ್ಯ ವಿದೈಸಲೇ. ನೀ ದೄಢ ಪತಿವ್ರತೆ ಯೆನ್ನ ಅನುಜ್ಞೆಯಲಿ ಭಾಸುರರ ನೀ ಭರತ ವಂಶ ವಿಲಾಸರನು ಕೄತ ಶತ್ರು ಪಕ್ಷ ವಿನಾಶರನು ಬೆಸಲಾಗು ಹೋಗೆನ್ನಾಣೆ ಹೋಗೆಂದ
ಯೆನ್ನ = My
ಅನುಜ್ಞೆಯಲಿ = Permission
ಬೆಸಲಾಗು = beget
Pandu Answered “Kunti, you spoke well. so the learned sage has initiated you? Truly a big favor bestowed on us. Your fidelity to husband is unquestionable. You have my consent. Go and bring forth worthy sons who will exalt the glory of Bharatha clan and relentlessly destroy its enemies.”
July 21, 2011 | In Kumaravyasa - Karnata Bharatha Kathamanjari | No Comments
ಕುಮಾರವ್ಯಸ – ಕರ್ಣಾಟ ಭಾರತ ಕಥಾಮಂಜರಿ (ಆದಿಪರ್ವ, ನಾಲ್ಕನೆಯ ಸಂಧಿ)
Posted by Prashant - 16/07/11 at 04:07:23 amPlease note you will need Kannada Font to read the post below
ನಾರಿಯರು ಮರುಗಿದರಕಟ ಮುದಿ
ಹಾರುವನ ತನಿಬೇಂಟೆ ನಮ್ಮಯ
ಬೇರುಗೊಲೆಯಾಗಿರ್ದುದೇ ಹಾಯೆನುತ ಬಿಸುಸುಯ್ದು
ವಾರಿಜಾನನೆ ಕುಂತಿ ಮೆಲ್ಲನೆ
ಸಾರಿದಳು ನಯದಲಿ ರಹಸ್ಯದ
ಲಾರುವರಿಯದವೋಲು ಬಿನ್ನಹ ಮಾಡಿದಲು ಪತಿಗೆ…………………………………೨೬
ನಾರಿಯರು ಮರುಗಿದರ ಅಕಟ ಮುದಿ ಹಾರುವನ ತನಿ ಬೇಂಟೆ ನಮ್ಮಯ ಬೇರುಗೆ ಒಲೆ ಆಗಿರ್ದುದೇ ಹಾ ಎನುತ ಬಿಸುಸುಯ್ದು. ವಾರಿಜಾನನೆ ಕುಂತಿ ಮೆಲ್ಲನೆ ಸಾರಿದಳು ನಯದಲಿ ರಹಸ್ಯದಲಿ ಆರು ಅರಿಯದವೋಲು. ಬಿನ್ನಹ ಮಾಡಿದಲು ಪತಿಗೆ
ಮರುಗು = be in pain or sorrow
ಮುದಿ = old age
ಹಾರುವ = Monk, Hermit
ತನಿ = Best of something, excellent
ಬೇಂಟೆ = It generally means hunting, but here it needs to be read as verity to assuage his sins
ಬೇರು = Roots (of the family)
ಒಲೆ = To shake
ವಾರಿಜಾನನೆ = Person with a lotus like face
ಬಿನ್ನಹ = To make a request
AS the time flowed by serenely, the two ladies grew somewhat morose. “Alas! This old man’s endless search for the verities has severed the very root of our family” they wailed. While serving him faithfully this worry kept them gnawing at their vitals. One day Kunti made bold to approach Pandu in secret ad poured these words in to his ear.
ಭರತ ವಂಶಕೆ ಪುತ್ರ ಶತವವ
ತರಿಸುವುದು ಗಾಂಧಾರಿ ದೇವಿಗೆ
ವರ ಮುನೀಶ್ವರನಿತ್ತ ವರವದು ನಿಮ್ಮಡಿಗಳರಿಯೆ
ದುರುಳ ಮುನಿಪನ ಶಾಪವೇ ಸ್ತ್ರೀ
ಪುರುಷ ಸಂಗ ವಿರೋಧ ನಮಗಿ
ನ್ನರಸ ನಾಪುತ್ರಸ್ಯಗತಿಯೆಂದಿರದೆ ಶ್ರುತಿವಚನ…………………………………೨೭
ಭರತ ವಂಶಕೆ ಪುತ್ರ ಶತವವ ತರಿಸುವುದು ಗಾಂಧಾರಿ ದೇವಿಗೆ ವರ ಮುನೀಶ್ವರನು ಇತ್ತ ವರವದು ನಿಮ್ಮ ಅಡಿಗಳ ಅರಿಯೆ. ದುರುಳ ಮುನಿಪನ ಶಾಪವೇ ಸ್ತ್ರೀ ಪುರುಷ ಸಂಗ ವಿರೋಧ ನಮಗಿನ್ನ ಅರಸ ನಾ ಪುತ್ರಸ್ಯ ಗತಿಯೆಂದಿರದೆ ಶ್ರುತಿ ವಚನ
ದುರುಳ = Wicked
“In Bharata lineage to which we belong sister Gandhari is to be blessed with a hundred sons, thanks to a boon conferred by a great sage; You are doubtless aware of it, my lord. As of us, man and women coming together is denied because of a wicked muni’s curse. It’s scriptural decree the son-less ones forfeit salvation
ಧರೆಯ ರಾಜ್ಯಸ್ಥಿತಿಗೆ ಸುತರವ
ತರಿಸುವರು ಗಾಂಧಾರಿಗಾ ಪು
ತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು
ಧರೆ ಪರಂಪರೆಯಿಂದಲತ್ತಲೆ
ಸರಿವುದೀ ನಿಮ್ಮಡಿಗೆ ದರ್ಭಾ
ಸ್ತರಣ ಸಮಿಧಾಧಾನವೇ ಕಡೆಗೆಂದಳಾ ಕುಂತಿ…………………………………೨೮
ಧರೆಯ ರಾಜ್ಯ ಸ್ಥಿತಿಗೆ ಸುತರ ಅವತರಿಸುವರು ಗಾಂಧಾರಿ ಆ ಪುತ್ರರಿಗೆ ಸುತರು ಆ ಸುತರ ಸುತರು ಅ ಸುತರ ಸೂನುಗಳು ಧರೆ ಪರಂಪರೆಯಿಂದಲ ಅತ್ತಲೆ ಸರಿವುದೀ, ನಿಮ್ಮ ಅಡಿಗೆ ದರ್ಭ ಆಸ್ತರಣ ಸಮಿಧಾ ಧಾನವೇ ಕಡೆಗೆ ಎಂದಳು ಆ ಕುಂತಿ
ಸೂನು = Child, Kid, Son
ದರ್ಭ = straw, coarse grass
ಆಸ್ತರಣ = Mat
ಸಮಿಧಾ = sacrificial fire
“To rule the world Gandhari will give birth to many children. To those children their children and their children, the wide world will belong in perpetuity. As for you, my lord, the mat of coarse grass and bundle of faggots for the sacrificial fire will be your sole possession” she taunted
ವನಜಮುಖಿ ಕೇಳ್ ಪುತ್ರಮುಖ ದ
ರ್ಶನವು ಸುಲಭವೆ ಪುಣ್ಯಹೀನರಿ
ಗೆನಿತು ಹಲುಬಿದರೇನು ಹಂಗಿಗರಾವು ದುಷ್ಕ್ರತಿಗೆ
ಮುನಿಯ ಬೇಟದ ಬೇಳುವೆಯ ಮಾ
ತಿನ ಹವಣ ನೀ ಬಲ್ಲೆ ಹೇಳಿ
ನ್ನೆನಗೆ ಕರ್ತವ್ಯವನು ಮಾನಿನಿ ಭೀತಿ ಬೇಡೆಂದ…………………………………೨೯
ವನಜಮುಖಿ ಕೇಳ್ ಪುತ್ರ ಮುಖ ದರ್ಶನವು ಸುಲಭವೆ ಪುಣ್ಯ ಹೀನರಿಗೆನಿತು. ಹಲುಬಿದರೆ ಏನು? ಹಂಗಿಗರಾವು ದುಷ್ಕ್ರತಿಗೆ. ಮುನಿಯ ಬೇಟದ ಬೇಳುವೆಯ ಮಾತಿನ ಹವಣ ನೀ ಬಲ್ಲೆ, ಹೇಳಿನ್ನೆನಗೆ ಕರ್ತವ್ಯವನು ಮಾನಿನಿ ಭೀತಿ ಬೇಡೆಂದ
ಹಂಗು = In Debt to someone
ದುಷ್ಕ್ರತಿ = Sin
ಬೇಟ = Sorrow caused because of Separation from loved ones
ಬೇಳುವೆ = it generally means Yagna or sacrificial fire but here it can be considered as fire
ಹವಣ = Measure of something. Here Pandu is saying to Kunti “You understand the measure of the fiery curse of muni’s separation from his loved ones”
Pandu was unruffled: “Listen, lotus=faced one, is the sight of son’s face within reach of hapless ones bereft of merit? Of what use bewailing over this? We are victims of sinning, you know the import of the muni’s curse. Do tell me what I could do. Be free to advise me without fear” he pleaded.
ನಾರಿಯರು ಮತ್ತಲ್ಲಿ ರಾಜ ಕು
ಮಾರಿಯರು ಛಲವಾದಿಗಳು ಗಾಂ
ಧಾರಿಗಾದುದುದು ಪುತ್ರಸಂತತಿಯೆಂಬ ಭೇದದಲಿ
ಧೀರ ಬಿನ್ನವಿಸಿದೆನು ಕಾರ್ಯದ
ಭಾರವನು ನೀ ಬಲ್ಲೆಯಿವಳು ವಿ
ಕಾರಿಯೆನ್ನದಿರೆಂದು ರಾಯನ ಚರಣಕೆರಗಿದಳು…………………………………೩೦
ನಾರಿಯರು ಮತ್ತಲ್ಲಿ ರಾಜ ಕುಮಾರಿಯರು ಛಲವಾದಿಗಳು ಗಾಂಧಾರಿಗೆ ಆದುದುದು ಪುತ್ರ ಸಂತತಿ ಎಂಬ ಭೇದದಲಿ ಧೀರ ಬಿನ್ನವಿಸಿದೆನು. ಕಾರ್ಯದ ಭಾರವನು ನೀ ಬಲ್ಲೆ. ಇವಳು ವಿಕಾರಿ ಎನ್ನದಿರು ಎಂದು ರಾಯನ ಚರಣಕೆ ಒರಗಿದಳು
Answered Kunti with some audacity, seeing the king’s self-pity. “We are but frail women and of royal blood and therefore stubborn in nature. Heart-broken by Gandhari’s fertility I made bold to divulge my sorrow to you. You’re the best judge of our future course of action. And pray don’t think of me as a perverted woman” she prostrated herself at his feet
July 16, 2011 | In Kumaravyasa - Karnata Bharatha Kathamanjari | No Comments
ಕುಮಾರವ್ಯಸ – ಕರ್ಣಾಟ ಭಾರತ ಕಥಾಮಂಜರಿ (ಆದಿಪರ್ವ, ನಾಲ್ಕನೆಯ ಸಂಧಿ)
Posted by Prashant - 13/07/11 at 03:07:54 pmPlease note you will need Kannada Font to read the post below
ಆದ ಹದನನು ಭೀಷ್ಮ ಧೄತರಾ
ಷ್ಟ್ರಾದಿಗಳಿಗರುಹಿದರೆ ಹಯ ಮೇ
ಧಾದಿ ಯಜ್ಞದಲೀ ಮಹಾ ಪಾತಕ ವಿಘಾತಕವ
ವೈದಿಕೋಕ್ತಿಯ ಮಂತ್ರದಲಿ ಸಂ
ಪಾದಿಸುವೆವೆನೆ ಶಿರವ ಬಿದುರಿಮ
ಹಾ ದುರಾಗ್ರಹ ಬುದ್ದಿಯಲಿ ಹೊರವಂಟನರಮನೆಯ…………………………………೨೧
ಆದ ಹದನನು ಭೀಷ್ಮ ಧೄತರಾಷ್ಟ್ರಾದಿಗಳಿಗೆ ಅರುಹಿದರೆ, ಹಯ ಮೇಧಾದಿ ಯಜ್ಞದಲೀ ಮಹಾ ಪಾತಕ ವಿಘಾತಕವ. ವೈದಿಕೋಕ್ತಿಯ ಮಂತ್ರದಲಿ ಸಂಪಾದಿಸುವೆವೆನೆ ಶಿರವ ಬಿದುರಿ, ಮಹಾ ದುರಾಗ್ರಹ ಬುದ್ದಿಯಲಿ ಹೊರ ಹೊಂಟನ ಅರಮನೆಯ
ಅರುಹಿ = To tell
ಹಯ = Literally mean a Horse. But in the context of Ashwamedha Yagna, it means evil
ಮೇಧ = To uproot. In this case uproot evil out of people
ಪಾತಕ = Sin
ವಿಘಾತಕ = It means a hinderance. Here hindeance to the evil sin the king has comitted.
ಶಿರವ ಬಿದುರಿ = ಶಿರವ+ಬಿದುರಿ = Head+To turn it left and right. So this means to turn head left and right to indicate non-agreement.
ದುರಾಗ್ರಹ = Headweight, arrogance
He Reported the incident to Bhishma Dhritarashtra and others. They counseled” By the performance of the mighty Aswamedha sacrifice and other propitiatory exercises this curse could be nullified”. But hot headed and obstinate as he was, king Pandu far from being reassured took the firm decision to relinquish the throne.
Probably this was another reason that led to the great war later, the adament Pandu not listening to the counsel of the wise.
ಸಕಲ ಭಂಡಾರವನು ಭೂಸುರ
ನಿಕರದಲಿ ಚೆಲ್ಲಿದನು ಸುಜನ
ಪ್ರಕರವನು ಗಾಂಗೇಯ ಧೄತರಾಷ್ಟ್ರರಿಗೆ ಕೈಗೊಳಿಸಿ
ಚಕಿತ ಚಿತ್ತನು ಮುನಿಹತಿಯ ಪಾ
ತಕದ ನೆತ್ತಿಯ ಸಬಳವಾವುದೊ
ಸಕಲ ಯೋಗಾವಳಿಯೊಳೆನುತೈದಿದನು ಕಾನನವ…………………………………೨೨
ಸಕಲ ಭಂಡಾರವನು ಭೂ ಸುರ ನಿಕರದಲಿ ಚೆಲ್ಲಿದನು. ಸುಜನ ಪ್ರಕರವನು ಗಾಂಗೇಯ ಧೄತರಾಷ್ಟ್ರರಿಗೆ ಕೈಗೊಳಿಸಿ, ಚಕಿತ ಚಿತ್ತನು, ಮುನಿ ಹತಿಯ ಪಾತಕದ ನೆತ್ತಿಯ ಸಬಳವಾವುದೊ ಸಕಲ ಯೋಗಾವಳಿಯೊಳ ಎನುತ ಐದಿದನು ಕಾನನವ
ಸುರ = god
ನಿಕರ = Group
ಸುಜನ = ಸು+ಜನ = Good+people
ಪ್ರಕರ = Here it means welfare
ಚಕಿತ = Be in Surprised or Shocked state
ಚಿತ್ತ = Mind
ಹತಿ = Killing
ಪಾತಕ = Sin
ನೆತ್ತಿ = It literally mean top of the head, but here it means the crux of the sin
ಸಬಳ = Here I guess it means a weapon. A weapon against the crux or core of the sin which the king has comitted.
ಐದು = It mean to reach a destination
There upon he distributed all his wealth to gods on earth and entrusted the welfare of his subjects to Gangeya and Dhritarashtra and in search of a way to expiate for the sin of killing a hermit couple, which heinous act though he was the innocent perpetrator. Portended dire consequences for him, he wended his way to a forest.
ಅರಸ ಕೇಳ್ ಶತಶೄಂಗ ಶೈಲದ
ವರತಪೋಧನರಾಶ್ರಮಕೆ ನಿ
ಮ್ಮರಸ ಬಂದನು ವಂದಿಸಿದನಾ ಪರಮ ಮುನಿವರರ
ಹರುಷದಲಿ ಜಾಬಾಲಿ ಗಾರ್ಗ್ಯಾಂ
ಗಿರಸ ಗಾಲವ ಗೌತಮಾದ್ಯರು
ಧರಣಿಪನ ಸಂಭಾವಿಸಿದರರ್ಘ್ಯಾಸನಾದಿಯಲಿ…………………………………೨೩
ಅರಸ ಕೇಳ್ ಶತ ಶೄಂಗ ಶೈಲದ ವರ ತಪೋಧನರ ಆಶ್ರಮಕೆ ನಿಮ್ಮ ಅರಸ ಬಂದನು, ವಂದಿಸಿದನು ಆ ಪರಮ ಮುನಿ ವರರ ಹರುಷದಲಿ. ಜಾಬಾಲಿ, ಗಾರ್ಗ್ಯಾ, ಅಂಗಿರಸ, ಗಾಲವ, ಗೌತಮಾದ್ಯರು ಧರಣಿಪನ ಸಂಭಾವಿಸಿದರು ಅರ್ಘ್ಯಾ, ಆಸನಾದಿಯಲಿ
ಶತ = Hundred
ಶೄಂಗ = Peak
ಶೈಲ = Mountain Range
ಸಂಭಾವಿಸು = To take care of
Harken, oh king; reaching the hundred peaked mountain, he found asylum in the placid retreats of sages Rich in penance. He was warmly greeted by the inmates among whom were famed Jabali Gargi Angirasa Galava and Goutama and offered the traditional pitcher of water. For laving hands and feet and a seat
ಈತನಮಲಾಷ್ಟಾಂಗಯೋಗ ವಿ
ಧೂತ ಕಿಲ್ಬಿಷನಾ ಬಳಿಕ ಮ
ಹಾತಪಸ್ವಿಗಳೊಳಗೆ ಸಂದನು ತೀವ್ರ ತೇಜದಲಿ
ಆ ತಪೋನಿಷ್ಠಂಗೆ ತಾವತಿ
ಭೀತಿ ಭಕ್ತಿಯೊಳಧಿಕ ಶುಶ್ರೂ
ಷಾತಿಶಯದಲಿ ಮನವ ಹಿಡಿದರು ಕುಂತಿ ಮಾದ್ರಿಯರು…………………………………೨೪
ಈತನ ಅಮಲ ಅಷ್ಟ ಅಂಗ ಯೋಗ ವಿಧೂತ ಕಿಲ್ಬಿಷನ, ಆ ಬಳಿಕ ಮಹಾ ತಪಸ್ವಿಗಳೊಳಗೆ ಸಂದನು ತೀವ್ರ ತೇಜದಲಿ. ಆ ತಪೋನಿಷ್ಠಂಗೆ ತಾವು ಅತಿ ಭೀತಿ ಭಕ್ತಿಯೊಳು ಅಧಿಕ ಶುಶ್ರೂಷ ಅತಿಶಯದಲಿ ಮನವ ಹಿಡಿದರು ಕುಂತಿ ಮಾದ್ರಿಯರು
ಅಮಲ = Something that is pure
ವಿಧೂತ = It means to shake the foundation of something, to cleanse
ಕಿಲ್ಬಿಷ = Sin, not pure
ಶುಶ್ರೂಷ = To Serve
ಅತಿಶಯ = Excessive, boundless
Sojourning in that placid haven he immersed himself in the scriptural studies. Mastering the eight fold system of yoga, he was cleansed free of all sin. Purified of all earthly dross he pursued the relentless path of tapas flogging mind and body into utter obedience. On their part Kunti and Madri served their ascetic spouse with fear and respect.
ಪರಮ ವೈರಾಗ್ಯದಲಿ ನಿರಂತ:
ಕರಣ ನಿರುಪಮ ಭಾವ ಶುದ್ಧಿಯ
ಮುರಹರ ಧ್ಯಾನೈಕ ಪೀಯೂಷಭಿಷೇಕದಲಿ
ಹೊರೆದು ಹೊಂಗಿದ ನಿಷ್ಪ್ರಪಂಚೋ
ತ್ಕರದ ಸುಖದುನ್ನತಿಯಲಿದ್ದನು
ಧರಣಿಪತಿ ಮುನಿಪನ ಮಹಾಪಾತಕವ ಕೆಡೆಯೊದೆದು…………………………………೨೫
ಪರಮ ವೈರಾಗ್ಯದಲಿ ನಿರಂತ:, ಕರಣ ನಿರುಪಮ, ಭಾವ ಶುದ್ಧಿಯ, ಮುರಹರ ಧ್ಯಾನ ಎಕ, ಪೀಯೂಷ ಅಭಿಷೇಕದಲಿ ಹೊರೆದು ಹೊಂಗಿದ ನಿಷ್ಪ್ರಪಂಚೋತ್ಕರದ ಸುಖದ ಉನ್ನತಿಯಲಿ ಇದ್ದನು ಧರಣಿಪತಿ ಮುನಿಪನ ಮಹಾ ಪಾತಕವ ಕೆಡೆಯೊದೆದು
ವೈರಾಗ್ಯ = renunciation
ಕರಣ = Work, tasks
ನಿರುಪಮ = Good
ಪೀಯೂಷ = Amrut, Milk
ಹೊಂಗಿ = To get
ನಿಷ್ಪ್ರಪಂಚೋತ್ಕರ = Excessive spirituality
Pandu as repentance to the sins, strictly followed the path of renunciation, always performing good deeds and immersing himself in penance of murahari. He excessively indulged in spirituality which helped him grow in happiness.
July 13, 2011 | In Kumaravyasa - Karnata Bharatha Kathamanjari | No Comments
ಕುಮಾರವ್ಯಸ – ಕರ್ಣಾಟ ಭಾರತ ಕಥಾಮಂಜರಿ (ಆದಿಪರ್ವ, ನಾಲ್ಕನೆಯ ಸಂಧಿ)
Posted by Prashant - 09/07/11 at 06:07:39 amPlease note you will need Kannada Font to read the post below
ಕಾತರಿಪ ಮುನಿಮಿಥುನವನು ನಿ
ನ್ನಾತ ಕಂಡನು ಬಿಲ್ಲಕೊಪ್ಪಿನ
ಲಾತ ಕದಪಿನ ಮಕುಟದೊಲವಿನ ಬೆರಳ ಬಿರುದನಿಯ
ಬೀತ ಸೊಂಪಿನ ತಳಿತ ಬೆರಗಿನ
ಪಾತಕದ ಪರುಠವದ ಮುಖದ ಮ
ಹೀತಳಾಧಿ ಸುಯ್ದು ನೊಂದನು ಶಿವಶಿವಾಯೆನುತ …………………………………೧೬
ಕಾತರಿಪ, ಮುನಿ ಮಿಥುನವನು ನಿನ್ನಾತ ಕಂಡನು, ಬಿಲ್ಲ ಕೊಪ್ಪಿನಲ ಆತ ಕದಪಿನ, ಮಕುಟದೊಲವಿನ ಬೆರಳ, ಬಿರು ದನಿಯ, ಬೀತ ಸೊಂಪಿನ, ತಳಿತ ಬೆರಗಿನ, ಪಾತಕದ ಪರುಠವದ ಮುಖದ ಮಹೀತಳಾಧಿ ಸುಯ್ದು ನೊಂದನು ಶಿವ ಶಿವಾ ಎನುತ
ಕಾತರಿ = Fear, Shock
ಕೊಪ್ಪಿನ = End or corner of the bow
ಕದಪಿನ = Cheeks
ಮಕುಟದೊಲವಿನ ಬೆರಳ = ಮಕುಟದೊಲವಿನ = ಮಕುಟದ+ಒಲವಿನ=Crown+like, I am not sure how to split this word, but my best guess is it means hair, something that “likes” the crown. ಬೆರಳ means fingers, but here I guess it means end, end of strand of hair. So by ಮಕುಟದೊಲವಿನ ಬೆರಳ, poet is trying to describe the scene where in king’s hair was fluttering around his crown as though it was playing with it.
ಬಿರುದನಿ = ಬಿರು+ದನಿ=coarse+voice = Probably poet is trying to describe the frightful voice of the king who knew he has murdered a innocent couple.
ಬೀತ = Fear
ಸೊಂಪಿನ = ಹಿಗ್ಗು, to inflate
ತಳಿತ = ಕೂಡಿದ, ಧರಿಸಿದ, to wear something (on face)
ಬೆರಗಿನ = Surprise
ಪಾತಕ = sin
ಪರುಠವ = It means to spread. Here ಪಾತಕದ ಪರುಠವದ ಮುಖದ mean the guilty feeling of committing a sin spread entirely on the face.
ಮಹೀತಳಾಧಿ = ಮಹೀತಳ+ಆಧಿ = ಮಹೀತಳ mean earth and ಆಧಿ mean to support or shelter. So ಮಹೀತಳಾಧಿ mean person who supports or shelters the earth, a King.
ಸುಯ್ದು = breath in despair
Shocked into sanity by the sight of the godly couple in mortal pain. The king stood rooted, cheek resting on the notched extremity of his bow and ginger playing with crested helmet. Appalled by the enormity of his offence and blood ebbing away from his face, he muttered to himself again and again “Siva Siva! What have I done?”
This is one of the verse that makes you like Kumaravyasa. He has that ability to paint the scene in front of you with his words. A king who was revered has murdered two innocent people and Kumaravyasa makes you feel as though you were standing next to him watching the pain and grief he goes through.
ಅರಿಯೆ ನಾನಿವರೆಂದು ಮೄಗವೆಂ
ದಿರಿದೊಡಿದು ಮತ್ತೊಂದು ಪರಿಯಾ
ಯ್ತುರುವ ಮಾಣಿಕವೆಂದು ಕೊಂಡಡೆ ಕೆಂಡವಾದುದಲ
ಸರವಿಯೇ ಹಾವಾದುದೇನೆಂ
ದರಿಯೆನೀ ಕೌತುಕವನುರೆ ಮೈ
ಮರೆಸಿ ಕೊಂದುದೆ ವಿಧಿಯೆನುತ ಹರಿತಂದನಾ ಸ್ಥಳಕೆ …………………………………೧೭
ಅರಿಯೆ ನಾನು ಇವರೆಂದು. ಮೄಗವೆಂದು ಇರಿದೊಡೆ ಇದು ಮತ್ತೊಂದು ಪರಿಯಾಯ್ತು. ಉರುವ ಮಾಣಿಕವೆಂದು ಕೊಂಡಡೆ ಕೆಂಡವಾದುದಲ, ಸರವಿಯೇ ಹಾವಾದು ಏನು ಎಂದು ಅರಿಯನು ಈ ಕೌತುಕವನು, ಉರೆ ಮೈಮರೆಸಿ ಕೊಂದುದೆ ವಿಧಿ, ಎನುತ ಹರಿತಂದನಾ ಸ್ಥಳಕೆ
ಪರಿಯಾಯ್ತು = Not sure what this words means
ಉರು= Best, sparkling. Here ಉರುವ ಮಾಣಿ means sparkling or shiny ruby.
ಕೆಂಡ = Ember
ಸರವಿ = Rope or blade of grass
ಕೌತುಕ = Surprise
“Alas, I was not aware of their true identity. Mistaking them for targets of the chase I shot my arrow into them. What looking like a sparkling ruby proved to be a blazing ember! when clutched. Innocent hunt has turned out to be a poison spitting snake! I know not what this mystery portends. May be fate in disguise finished them!”. Muttering incoherently thus, he came running to where they lay.
ಉಗಿದು ಬಿಸುಟನು ಸರಳ ಮಗ್ಗುಲ
ಮಗುಚಿ ನೆತ್ತರ ಹೊನಲಿನೀಚೆಗೆ
ತೆಗೆದು ತೊಳೆತೊಳೆದೊರಸಿದನು ಸಗ್ಗಳೆಯ ನೀರಿನಲಿ
ಮೄಗವಹರೆ ಮಾನಿಸಕಟ ಪಾ
ಪಿಗಳಿಗೆತ್ತಣ ತಪವಿದೆತ್ತಣ
ಮೄಗ ವಿನೋದಕ್ರೀಡೆ ಕೊಂದಿರೆನುತ್ತ ಬಿಸುಸುಯ್ದ …………………………………೧೮
ಉಗಿದು ಬಿಸುಟನು ಸರಳ ಮಗ್ಗುಲ ಮಗುಚಿ ನೆತ್ತರ ಹೊನಲಿನ ಇಚೆಗೆ ತೆಗೆದು ತೊಳೆ ತೊಳೆದು ಒರಸಿದನು ಸಗ್ಗಳೆಯ ನೀರಿನಲಿ. ಮೄಗವಹರೆ ಮಾನಿಸರು ಅಕಟ, ಪಾಪಿಗಳಿಗೆ ಎತ್ತಣ ತಪವು, ಎತ್ತಣ ಮೄಗ ವಿನೋದ ಕ್ರೀಡೆ! ಕೊಂದಿರೆ ಎನುತ್ತ ಬಿಸುಸುಯ್ದ
ಉಗಿದು = To pull out
ಬಿಸುಟನು = To throw away
ಸರಳ = Arrow
ಮಗ್ಗುಲ = to the side of something.
ಮಗುಚಿ = To turn something around
ನೆತ್ತರ = Blood
ಹೊನಲ = Pool (of blood)
ಸಗ್ಗಳೆ = A bag made of animal skin to hold water
ಮಾನಿಸರು = resembling humans
ಅಕಟ = Aiyo. A Phrase used to represent a feeling of remorse, disgust
He pulled out the arrow; staunching the blood, washed the wound with water from his drinking bag and wiped it clean. “Can men change in to animals! Aiyo! where is any tapas for sinners? What sort of a hunting spree has this turned out to be? My ardour for the chase is killed” murmured he, sick at heart.
ಮತ್ತೆ ನಾವೇ ಪಾಪಿಗಳೆ ನೀ
ನುತ್ತಮನಲಾ ಸಾಕಿದೇತಕೆ
ನುತ್ತ ಮರಳುವ ಕಂಗಳಡಿಗಡಿಗುಗಿವ ಮೇಲುಸುರ
ಎತ್ತಿ ಹಾಯ್ಕುವ ಕೊರಳ ಬಿಕ್ಕುಳ
ತೆತ್ತುವಧರದ ರೋಷದಲಿ ಹೊಗೆ
ಸುತ್ತಿದುರಿವಾತುಗಳ ಸೂಸಿದರವನಿಪನ ಮೇಲೆ …………………………………೧೯
ಮತ್ತೆ ನಾವೇ ಪಾಪಿಗಳೆ, ನೀನು ಉತ್ತಮನು ಅಲಾ? ಸಾಕು ಇದೇತಕೆ ಎನುತ್ತ, ಮರಳುವ ಕಂಗಳ ಅಡಿಗಡಿಗ ಉಗಿವ ಮೇಲ ಉಸುರ ಎತ್ತಿ ಹಾಯ್ಕುವ, ಕೊರಳ ಬಿಕ್ಕುಳ ತೆತ್ತುವ ಅಧರದ, ರೋಷದಲಿ ಹೊಗೆ ಸುತ್ತಿದುರಿವಾತುಗಳ ಸೂಸಿದರವನಿಪನ ಮೇಲೆ
ಅಧರದ = Shaking
These words, provoked the wounded couple. “So we are sinners and you a paragon of virtue eh! Stop this nonsense!” Shouted they. Eyes rolling, out of breath every other moment, neck convulsed, lips trembling; thus writing in deep anguish they spat out an imprecation on the king.
One might be wondering what wrong did the King do by killing deers, after-all Pandu was hunting and there was no way for him to know that the sage couple had transformed themselves into deers. Also one might be surprised why the Sage is so angry at being shot when he had transformed into a deer himseld. Answer is that there was nothing wrong in killing a deer or not knowing that Sage has transformed himself into a deer, but according to Raja dharma, a king is not suppose to kill a couple who are making out with each other, the couple could be human or animals and Pandu violated this rule and that is why Sage was furious. This is made very clear in the next verse.
ಎಲವೊ ರಾಜಬ್ರುವನೆ ತನ್ನಯ
ಲಲನೆಯೊಡನಿರೆ ಕೊಂದೆ ನಿನ್ನಯ
ಲಲನೆಯನು ನೀ ಕೂಡಿದಾಗಲೆ ಮರಣ ನಿನಗಹುದು
ಹಲವು ಮಾತೇಕೆನುತ ಹರಣವ
ಕಳೆದುದಾ ಮುನಿ ಮಿಥುನವವನಿಪ
ತಿಲಕ ದುಮ್ಮಾನದಲಿ ಬಂದನು ಹಸ್ತಿನಾಪುರಕೆ …………………………………೨೦
ಎಲವೊ ರಾಜ ಬ್ರುವನೆ, ತನ್ನಯ ಲಲನೆಯೊಡನೆ ಇರೆ ಕೊಂದೆ, ನಿನ್ನಯ ಲಲನೆಯನು ನೀ ಕೂಡಿದಾಗಲೆ ಮರಣ ನಿನಗೆ ಅಹುದು, ಹಲವು ಮಾತು ಏಕೆ ಎನುತ ಹರಣವ ಕಳೆದುದ ಆ ಮುನಿ ಮಿಥುನವ ಅವನಿಪ ತಿಲಕ ದುಮ್ಮಾನದಲಿ ಬಂದನು ಹಸ್ತಿನಾಪುರಕೆ
ಬ್ರುವನೆ = Person who does not have skills to perform the task his position demand.
ತಿಲಕ = Here, I guess it means the forehead. Pandu had that sadness which was reflecting on his forehead.
ದುಮ್ಮಾ = Sadness
“Wretch of a king, you chose to murder us while we were making love. In retribution there of may death come to you even as you are in physical intimacy with your beloved. But why waste words?”. Even as this curse was on their lips, the hermit couple breathed their last and the king returned to Hastinapura in a greatly chastened mood.
July 9, 2011 | In Kumaravyasa - Karnata Bharatha Kathamanjari | No Comments
Magical Yosemite
Posted by Prashant - 11/06/11 at 05:06:11 pmI never understood the magic.. rocky steeps dotted with whiffs of white mist under an open sky, carpets of green, quite tranquil pool of water mirroring the towering pine trees, is all that is needed to cast a spell..I really never understood the magic.
June 11, 2011 | In Photography | No Comments
Karl Pilkington – An Idiot Abroad
Posted by Prashant - 23/01/11 at 11:01:03 am
If you are looking for recommendations on travel related writing this will surely be one of the book I would recommend. Very light to read and highly entertaining. It is unlike your regular travelogue which generally documents the routine, boring how-to’s, do’s, dont’s of travel to a place. This book is different and reasons for it include;
- The author is Karl Pilkington
- Karl hates to travel
- Many of the situations during the travel of Karl were, as confessed by Ricky, planted so as to maximize the fun
- Envious itinerary which includes 7 wonders of the world
What makes the travelogue interesting is not the places or situations that Karl gets into, but his so non-traveler interpretation of those experience. Seeing the magnificent Pyramids, while a regular traveler goes gung-ho on culture, architecture etc..Karl see’s it as a massive game of Jenga that has got completely out of hand. It is this element of unexpected angle that Karl gives to the situation that makes this book hilarious and super entertaining.
All in all a great read. Also there is a video documentary also which has been release. I am sure it will be another great watch.
January 23, 2011 | In What am I reading | No Comments
ಕುಮಾರವ್ಯಸ – ಕರ್ಣಾಟ ಭಾರತ ಕಥಾಮಂಜರಿ (ಆದಿಪರ್ವ, ನಾಲ್ಕನೆಯ ಸಂಧಿ)
Posted by Prashant - 22/01/11 at 04:01:07 pmPlease note you will need Kannada Font to read the post below
ಧರಿಸಿದಳು ಗಾಂಧಾರಿ ಗರ್ಭೋ
ತ್ಕರವನಿತ್ತ ನಿಜಾಶ್ರಮಕೆ ಮುನಿ
ತಿರುಗಿದನು ದಿನದಿನದೊಳುಬ್ಬಿತು ರಾಯನಭ್ಯುದಯ
ಅರಸ ಕೇಳೈ ಬೇಂಟೆಗಾರರು
ಕರೆಯ ಬಂದರು ಮೄಗನಿಕಾಯದ
ನೆರವಿಗಳ ನೆಲೆಗೊಳಿಸಿ ಪಾಂಡು ನೄಪಾಲನೋಲಗಕೆ …………………………………೧೧
ಧರಿಸಿದಳು ಗಾಂಧಾರಿ ಗರ್ಭೋತ್ಕರವನು. ಇತ್ತ ನಿಜ ಆಶ್ರಮಕೆ ಮುನಿ ತಿರುಗಿದನು. ದಿನ ದಿನದೊಳ ಉಬ್ಬಿತು ರಾಯನ ಅಭ್ಯುದಯ. ಅರಸ ಕೇಳೈ, ಬೇಂಟೆಗಾರರು ಕರೆಯ ಬಂದರು ಮೄಗ ನಿಕಾಯದ ನೆರವಿಗಳ ನೆಲೆಗೊಳಿಸಿ ಪಾಂಡು ನೄಪಾಲನ ಓಲಗಕೆ
ಗರ್ಭೋತ್ಕರ = ಶ್ರೇಷ್ಠವಾದ ಗರ್ಭ
ನಿಜ = It means “His”..so ನಿಜ ಆಶ್ರಮ mean “his Ashram”
ಅಭ್ಯುದಯ = Prosperity
ನಿಕಾಯ = strategic spot where animals can generally be found
ನೆರವಿ = group
ನೆಲೆಗೊಳಿಸು = It mean to stabilize but here it mean “To identify”
ಓಲಗ = Palace
By the power of the talisman Gandhari conceived and day by day Dhritarashtra’s good fortune grew apace. Pray listen, my king; meanwhile having set the sage for good hunting by driving wild game into strategic spots, huntsman approached king Pandu in his palace to invite him to the chase.
ಕೇಳಿದನು ಮೄಗದಿಕ್ಕೆ ಹಕ್ಕೆಯ
ಗಾಳಿಯನು ಕೊಂಬುಗಳನಾಗಳೆ
ಬೀಳು ಕೊಟ್ಟನು ರಾಜಸಭೆಯನು ರಾಯನುಚಿತಲಿ
ಬೋಳೆ ಕವಲಂಬುಗಳ ಹದವಿಲು
ತಾಳಿಕೆಯ ಕುಪ್ಪಸದ ಬೇಂಟೆಯ
ಮೇಳದಲಿ ಭೂಪಾಲ ಹೊರವಂಟನು ನಜಾಲಯವ …………………………………೧೨
ಕೇಳಿದನು ಮೄಗದ ಇಕ್ಕೆ ಹಕ್ಕೆಯ ಗಾಳಿಯನು ಕೊಂಬುಗಳನಾಗಳೆ ಬೀಳು ಕೊಟ್ಟನು ರಾಜಸಭೆಯನು ರಾಯನುಚಿತಲಿ. ಬೋಳೆ, ಕವಲ ಅಂಬುಗಳ, ಹದವಿಲು, ತಾಳಿಕೆಯ ಕುಪ್ಪಸದ, ಬೇಂಟೆಯ ಮೇಳದಲಿ ಭೂಪಾಲ ಹೊರವಂಟನು ನಜಾಲಯವ
ಇಕ್ಕೆ = It means presence..here presence of animals
ಹಕ್ಕೆ = Home, main site where animals can be found
ಗಾಳಿಯನು ಕೊಂಬುಗಳನಾಗಳೆ = I am not sure what this means
ಬೀಳು = To send back or dismiss
ಬೋಳೆ = It is a type of arrow
ಕವಲ = It means something that is split, forked
ಅಂಬು = Arrows
ಹದವಿಲು = Stiff bow
ತಾಳಿಕೆ = Something that can be worn
ಮೇಳ = Group
No sooner was the matter broached than the king savoring the prospect of a good hunt dismissed his council of ministers then in session and mustering forked arrows, taut bow and other requisites of the royal sport and surrounded by a retinue left for the forest.
Look at the way Kumaravyasa describes each of the type of arrows, he could have generalized it as arrows but no he says ಬೋಳೆ, ಕವಲ ಅಂಬುಗಳ etc. This is one of the reason why literature becomes important, it freezes in time the essence of culture of a gone by era. This is not just true with Kumaravyasa but any literature. If you take Shakespeare, he has words to describe some obscure things which we hardly know of these days.
ಏನನೆಂಬೆನು ನಿಮ್ಮನು ಪಿಶಾ
ಚೋನ್ನೄಪಾಲಕರೆಂಬವೋಲ್ ವ್ಯಸ
ನಾನುಬಂಧದ ಬೇಗೆ ಕೊಂಡೊಯ್ದುದು ಮಹೀಪತಿಯ
ಕಾನನೆದೊಳಾಯತದ ಶರ ಸಂ
ಧಾನ ಕಲಿತ ಶರಾಸನನು ಮೄಗ
ಹಾನಿಗಳ ಹೆಕ್ಕಳದೊಳೋಲಾಡಿದನು ಬೇಂಟೆಯಲಿ …………………………………೧೩
ಏನನ ಎಂಬೆನು ನಿಮ್ಮನು? ಪಿಶಾಚೋ ನೄಪಾಲಕರು ಎಂಬವೋಲ್. ವ್ಯಸನ ಅನುಬಂಧದ ಬೇಗೆ ಕೊಂಡೊಯ್ದುದು ಮಹೀ ಪತಿಯ ಕಾನನೆದೊಳ. ಆಯತದ ಶರ ಸಂಧಾನ, ಕಲಿತ ಶರಾಸನನು ಮೄಗ ಹಾನಿಗಳ ಹೆಕ್ಕಳದೊಳ ಓಲಾಡಿದನು ಬೇಂಟೆಯಲಿ
ಪಿಶಾಚೋ ನೄಪಾಲಕರು= ಪಿಶಾಚಿ means Devil+ನೄಪಾಲಕ means king…so ಪಿಶಾಚೋ ನೄಪಾಲಕರು means king of devils..very evil
ವ್ಯಸನ = It means habit, generally a bad habit
ಅನುಬಂಧ = Friendship. Here king’s friendship with a bad habit(Hunting)
ಬೇಗೆ = Fire
ಆಯತದ = Here it mean doing a task without stopping
ಶರ = arrow
ಸಂಧಾನ = Here it mean firing of arrows from a bow
ಕಲಿತ = Not missing the aim while shooting an arrow
ಹೆಕ್ಕಳ = Deriving pleasure
ಓಲಾಡು = To enjoy
With devilish ardor the king plunged into the spirit of the chase. Without a pause, he went on fitting arrow to bow and the pile of dead beasts brought down by his sure aim went on growing. How to describe his passion for slaughter of helpless denizens of the wild, except by giving him the sobriquet, fiendish king.
ಬಂದುದಾ ಪಾಂಡುವಿಗೆ ನಿನ್ನಯ
ತಂದೆಗಾದ ವಿಪತ್ತಿನಂದದ
ಲೊಂದು ಠಾವಿನಲೊಬ್ಬ ಮುನಿ ಮೄಗ ಮಿಥುನ ರೂಪಿನಲಿ
ನಿಂದು ರಮಿಸುತ್ತಿರೆ ಮೄಗದ್ವಯ
ವಂದು ಹೊಡಿದನಂಬನಿಬ್ಬರಿ
ಗೊಂದು ಶರದಲಿ ಕೀಲಿಸಿದಡೊರಲಿದರು ನರರಾಗಿ …………………………………೧೪
ಬಂದುದು ಆ ಪಾಂಡುವಿಗೆ ನಿನ್ನಯ ತಂದೆಗೆ ಆದ ವಿಪತ್ತಿನಂದದ ಲೊಂದು ಠಾವಿನಲಿ ಒಬ್ಬ ಮುನಿ ಮೄಗ ಮಿಥುನ ರೂಪಿನಲಿ. ನಿಂದು ರಮಿಸುತ್ತಿರೆ, ಮೄಗ ದ್ವಯವೆಂದು ಹೊಡಿದನ ಅಂಬನು ಇಬ್ಬರಿಗೆ ಒಂದು ಶರದಲಿ ಕೀಲಿಸಿದಡೆ ಒರಲಿದರು ನರರಾಗಿ
ಠಾವು = Place
ಮಿಥುನ = Being together
ಅಂಬು = Arrow
ಕೀಲಿಸು = It mean to join two things into one
While thus engaged in this mad sport of killing king Pandu himself was the victim of a terrible disaster, such as the one your own father encountered, oh king. A hermit was mating with his spouse, both disguised as deer. With but a single arrow, Pandu bored through both of them. The next moment regaining human form the two screamed in pain
Here Kumaravyasa says “ನಿನ್ನಯ ತಂದೆಗೆ ಆದ ವಿಪತ್ತು”, The father being referred here is King Parikshita, who was in a dire situation (He would die of snake bite) similar to what Pandu was. So the first two lines are told to King Janemejaya who is listening to story of Mahabharata from Vayshampayana.
Also it is worth to notice the word “ಕೀಲಿಸಿದಡೆ”. It is such an apt word which freezes so much action and renders it in front of the reader. The king’s zeal for hunting and devilish passion for slaughter of helpless animals is portrayed by the way the arrow was shot. It was with such force that two animals fused to become one.
ಹಾ ಮಹಾದೇವಯೆನುತ್ತೆ ಸ
ನಾಮಮುನಿ ತೆತ್ತಿಸಿದ ಬೆನ್ನಿನ
ತೋಮರದ ಮರುಮೊನೆಯ ಕಿಬ್ಬಸುರಿನ ನಿಜಾಂಗನೆಯ
ಕಾಮಿನಿಯೆ ಕಡುನೊಂದೆಲಾ ಮುಖ
ತಾಮರಸವನು ತೋರು ತೋರೆನು
ತಾ ಮುನೀಶ್ವನಪ್ಪಿ ಮುಂಡಾಡಿದನು ನಿಜಸತಿಯ …………………………………೧೫
ಹಾ ಮಹಾದೇವಯೆನುತ್ತ ಸನಾಮ ಮುನಿ ತೆತ್ತಿಸಿದ ಬೆನ್ನಿನ ತೋಮರದ ಮರುಮೊನೆಯ ಕಿಬ್ಬಸುರಿನ ನಿಜಾಂಗನೆಯ. ಕಾಮಿನಿಯೆ ಕಡುನೊಂದೆಲಾ! ಮುಖ ತಾಮರಸವನು ತೋರು ತೋರೆನು ತಾ ಮುನೀಶ್ವನು ಅಪ್ಪಿ ಮುಂಡಾಡಿದನು ನಿಜ ಸತಿಯ
ಸನಾಮ = popular
ತೆತ್ತಿಸಿದ = to join
ತೋಮರ = It is kind of weapon, here an arrow
ಮರುಮೊನೆ = ಮರು+ಮೊನೆ = Other+end of arrow = so ಮರುಮೊನೆ means other side of the arrow
ಕಿಬ್ಬಸುರಿನ = Lower part of the stomach
ನಿಜಾಂಗನೆಯ = ?
ತಾಮರಸ = Lotus
ಮುಂಡಾಡು = To Hug
Entering the muni’s body from the back the arrow had whizzed its way into the lady’s belly. Crying out “Ha! Mahadeva!” in deep anguish, the poor soul unable to endure his wife’s suffering called out “Beloved, you are grievously hurt; Come, show me your lotus-face, show me!” and in frenzy pressed her to his bosom.
January 22, 2011 | In Kumaravyasa - Karnata Bharatha Kathamanjari | No Comments
All content copyright Prashant Durgadmath.
Theme : GimpStyle Theme

