ಕುಮಾರವ್ಯಸ – ಕರ್ಣಾಟ ಭಾರತ ಕಥಾಮಂಜರಿ (ಆದಿಪರ್ವ, ಪೀಠಿಕಾ ಸಂಧಿ)

Kumaravyasa’s – Karnata Bharatha Kathamanjari, Aadi Parva, Peetika Sandhi

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ
………………………………… ೩

ವರ ಮಣಿಗಳ ಇಂದ ಎಸೆವ ಮೌಳಿಯ. ಸರಸಿಜಾರಿಯ ಕಿರಣದ ಓಳಿಯ. ವಿರಚಿಸಿದ ಸಿಂಧೂರ ಭಾಳದಿ ಕುಣಿವ ಕುಂತಳದ. ಕರಿನಿಭ ಆಕೃತಿ ಎನಿಪ ವದನದ. ಕರದ ಪಾಶದ ಮೋದಕದ ವಿಸ್ತರದ ಗಣಪತಿ, ಮಾಡ ಎಮಗೆ ನಿರ್ವಿಘ್ನದ ಆಯಕವ

ವರ = ಶ್ರೇಷ್ಠ
ಮಣಿ = ರತ್ನ, gems
ಎಸೆ = Shine, ಪ್ರಕಾಶಿಸು
ಮೌಳಿ = ಕಿರೀಟ, crown
ಓಳಿ = ಸಾಲು, ಪಂಕ್ತಿ
ಸಿಂಧೂರ = ಚಂದ್ರ, moon
ಭಾಳ = Forehead, ಹಣೆ
ಕುಂತಳ = Hair
ಕರಿನಿಭ = ಕರಿ means elephant, ಕರಿನಿಭ mean something that is in the shape of an elephant.
ವದನದ = face
ಕರ = Hand
ಪಾಶ = Rope, ಹಗ್ಗ
ಮೋದಕ = One of the favorite savory of Lord Ganesh
ವಿಸ್ತರ = Description
ಆಯ = ಅನುಕೂಲ

Crest adorned with lustrous gems shines like a line of soft moon beams, truant locks frolic on vermilion – smeared forehead. Face with the visage of elephant, with noose and sweet crispies in fist, So revealed, Oh Ganapathi, free my path of impediments.

ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ವುದು ಮತಿಗೆ ಮಂಗಳವ………………………………… ೪

ಗಜ ಮುಖನೆ ಮೆರೆವ ಏಕ ದಂತನೆ. ನಿಜ ಗುಣ ಅನ್ವಿತ ಪರಶುಧಾರನೆ. ರಜತ ಗಿರಗೆ ಒಡೆಯನ ಕುಮಾರನೆ. ವಿದ್ಯೆ ವಾರಿಧಿಯೆ. ಅಜನು ಹರಿ ರುದ್ರಾದಿಗಳು ನೆರೆ ಭಜಿಸುತಿಹರ ಅನವರತ ನಿನ್ನನು. ತ್ರಿ ಜಗ ವಂದಿತ ಗಣಪ. ಮಾಳ್ವುದು ಮತಿಗೆ ಮಂಗಳವ

ಮೆರೆ = ಪ್ರದರ್ಶಿಸು
ಅನ್ವಿತ = ಕೂಡಿದ, ಸೇರಿದ
ಪರಶು = Axe
ರಜತ = Kailas
ವಾರಿಧಿ = Ocean
ಅಜ = One who does not have a birth, Brahma
ಅನವರತ = ಯಾವಾಗಲೂ, all the time

Elephant – Visage, Single-toothed, Who wields the ace symbolizing truth, son of Prameswara, who is the lord of silver peaked Kailas, Ocean of learning, adored by the Trinity – Brahma (ಅಜ), Vishnu (ಹರಿ) and Maheswara(ರುದ್ರಾ), Ganapathi, venerated by the three worlds. Lead my mind in the right direction

Note:
All English translations are not mine and are taken from book by D. Sheshagiri Rao.

VN:F [1.9.3_1094]
Rate This Post:
Rating: 0.0/5 (0 votes cast)
VN:F [1.9.3_1094]
Rating: 0 (from 0 votes)

No Comments yet »

RSS feed for comments on this post. TrackBack URI

Leave a comment

XHTML: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

All content copyright Prashant Durgadmath.
Theme : GimpStyle Theme